Shenga Holige, also known as Peanut Poli, is a unique variety of flatbread that is very popular in North Karnataka households. Unlike the traditional lentil or coconut holige which are soft, Shenga Holige is known for being slightly crispy and flaky. The outer layer is made of wheat flour, and the inside is packed with a powdery mix of roasted peanuts and jaggery. The best part about Shenga Holige is its shelf life—it stays fresh for weeks without spoiling, making it an excellent snack to store at home or carry during long travels. The combination of the nutty peanut flavor with sweet jaggery is simply addictive!
ಶೇಂಗಾ ಹೋಳಿಗೆ ಅಥವಾ ಕಡಲೆಕಾಯಿ ಒಬ್ಬಟ್ಟು ಉತ್ತರ ಕರ್ನಾಟಕದ ಒಂದು ವಿಶೇಷವಾದ ಖಾದ್ಯ. ಸಾಮಾನ್ಯವಾಗಿ ಬೇಳೆ ಹೋಳಿಗೆ ಮೆತ್ತಗಿರುತ್ತದೆ, ಆದರೆ ಶೇಂಗಾ ಹೋಳಿಗೆ ಸ್ವಲ್ಪ ಗರಿಗರಿಯಾಗಿರುವುದು ಇದರ ವಿಶೇಷತೆ. ಗೋಧಿ ಹಿಟ್ಟಿನ ಕಣಕದೊಳಗೆ, ಹುರಿದ ಶೇಂಗಾ ಮತ್ತು ಬೆಲ್ಲದ ಪುಡಿಯನ್ನು ತುಂಬಿ ಇದನ್ನು ಲಟ್ಟಿಸಲಾಗುತ್ತದೆ. ಇದರ ಅತಿ ದೊಡ್ಡ ಅನುಕೂಲವೆಂದರೆ ಇದು ಬೇಗ ಕೆಡುವುದಿಲ್ಲ. ಗಟ್ಟಿಯಾಗಿರುವುದರಿಂದ ಇದನ್ನು ವಾರಗಟ್ಟಲೆ ಡಬ್ಬಿಯಲ್ಲಿ ಶೇಖರಿಸಿ ಇಡಬಹುದು. ಪ್ರವಾಸಕ್ಕೆ ಹೋಗುವಾಗ ಬುತ್ತಿ ಕಟ್ಟಲು ಅಥವಾ ಮಕ್ಕಳಿಗೆ ಸ್ನ್ಯಾಕ್ಸ್ ಆಗಿ ಕೊಡಲು ಇದು ಅತ್ಯುತ್ತಮ. ಶೇಂಗಾ ಮತ್ತು ಬೆಲ್ಲದ ಆ ರುಚಿ ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ!





Reviews
There are no reviews yet.