Hooranada Holige is often considered the king of festive sweets in our region. It requires skill to make it paper-thin and soft without breaking. The stuffing, called ‘Hoorana’, is prepared by cooking lentils with jaggery and cardamom, which gives it a rich aroma. It is not just a sweet; it is a must-have during festivals like Ugadi and family weddings. The traditional way to enjoy it is piping hot, topped with fresh ghee and served alongside warm milk or mango pulp (seekarane).
ಹೂರಣದ ಹೋಳಿಗೆ ಹಬ್ಬದ ಊಟದ ಕಳೆ ಹೆಚ್ಚಿಸುವ ಒಂದು ಶ್ರೇಷ್ಠ ಭಕ್ಷ್ಯ. ಕಡ್ಲೆಬೇಳೆ ಅಥವಾ ತೊಗರಿಬೇಳೆಯನ್ನು ಬೆಲ್ಲದೊಂದಿಗೆ ಬೇಯಿಸಿ, ಏಲಕ್ಕಿ ಸೇರಿಸಿ ರುಬ್ಬಿದ “ಹೂರಣ”ವನ್ನು, ಮೈದಾ ಅಥವಾ ಚಿರೋಟಿ ರವೆಯ ಕಣಕದೊಳಗೆ ಇಟ್ಟು ತೀರಾ ತೆಳ್ಳಗೆ ಲಟ್ಟಿಸಿ ಇದನ್ನು ಮಾಡುತ್ತಾರೆ. ಇದು ಎಷ್ಟು ಮೃದುವಾಗಿರುತ್ತದೆ ಎಂದರೆ ಸುಮ್ಮನೆ ಕೈಯಲ್ಲಿ ಮುರಿದುಕೊಂಡು ತಿನ್ನಬಹುದು. ಯುಗಾದಿ ಹಬ್ಬವಾಗಲಿ ಅಥವಾ ಮದುವೆ ಸಮಾರಂಭವಾಗಲಿ, ಊಟದ ಎಲೆಯಲ್ಲಿ ಹೋಳಿಗೆ ಬಿದ್ದರೆನೆ ತೃಪ್ತಿ. ಬಿಸಿ ಬಿಸಿ ಹೋಳಿಗೆಗೆ, ಹಸುವಿನ ತುಪ್ಪ ಮತ್ತು ಬಿಸಿ ಹಾಲು ಅಥವಾ ಮಾವಿನ ಹಣ್ಣಿನ ಸೀಕರಣೆ ಸೇರಿಸಿಕೊಂಡು ಊಟಮಾಡುವ ಮಜಾನೇ ಬೇರೆ.






Reviews
There are no reviews yet.